ಬೆಂಗಳೂರು, ಜೂನ್ 28: ರಾಷ್ಟ್ರೋತ್ಥಾನ ಚೆಸ್ ಅಕಾಡೆಮಿಯ ವತಿಯಿಂದ ಬಸವನಗುಡಿ ರಾಷ್ಟ್ರೋತ‍್ಥಾನ ಯೋಗಕೇಂದ್ರದಲ್ಲಿ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್‍ನ ಖಜಾಂಚಿಗಳಾದ ಶ್ರೀ ನಾರಾಯಣ ಕೆ. ಎಸ್. ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. U-8, U-11, U-13, U-17 ಹಾಗೂ Open Tournament, ಎಂಬ 5 ವಿಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಧನಾತ್ಮಕ ಚಿಂತನೆಯೊಂದಿಗೆ ಮಕ್ಕಳನ್ನು ಬೆಳೆಸುವ ಕುರಿತು ಶ್ರೀಮತಿ ಸುಷ್ಮಾ ಅವರು ಉಪನ್ಯಾಸವನ್ನು ನೀಡಿದರು.